ಕ್ಯಾಲೊಮೆಲ್ ಎಲೆಕ್ಟ್ರೋಡ್

ದತ್ತವಿಭವವಿದ್ದು ಒಂದು ನಿರ್ದೇಶೀ ಎಲೆಕ್ಟ್ರೋಡ್ ಆಗಿ ವ್ಯಾಪಕವಾಗಿ ಬಳಕೆಯಲ್ಲಿರುವ ಎಲೆಕ್ಟ್ರೋಡ್.  ಪ್ರತಿಯೊಂದು ವಿದ್ಯುತ್ ಕೋಶದಲ್ಲಿ ಸಾಮಾನ್ಯವಾಗಿ ಎರಡು ಎಲೆಕ್ಟ್ರೋಡುಗಳಿರುತ್ತವೆ.  ಅವುಗಳಲ್ಲಿ ಒಂದನ್ನು ಕ್ಯಾಥೋಡ್ ಮತ್ತೊಂದನ್ನು ಆನೋಡ್ ಆಗಿ ಉಪಯೋಗಿಸುತ್ತಾರೆ.  ಇಂಥ ಕೋಶದ ವಿದ್ಯುದ್ವಾಹಕ ಶಕ್ತಿ (ಎಲೆಕ್ಟ್ರೊಮೋಟಿವ್ ಫೋರ್ಸ್) ಇವೆರಡು ಎಲೆಕ್ಟ್ರೋಡ್ ವಿಭವಗಳ ಬೈಜಿಕ ಮೊತ್ತಕ್ಕೆ ಸಮ.  ವಿದ್ಯುತ್ಕೋಶದ ಪ್ರತಿಯೊಂದು ಎಲೆಕ್ಟ್ರೋಡಿನ ಏಕಎಲೆಕ್ಟ್ರೋಡ್‍ವಿಭವವನ್ನು (ಸಿಂಗಲ್ ಎಲೆಕ್ಟ್ರೋಡ್ ಪೊಟೆನ್ಷಿಯಲ್) ಕಂಡುಹಿಡಿಯಬೇಕಾದರೆ ಆ ಎಲೆಕ್ಟ್ರೋಡನ್ನು ಒಂದು ಶಿಷ್ಟ ಎಲೆಕ್ಟ್ರೋಡಿನ ಜೊತೆಗೂಡಿಸಿ ವಿದ್ಯತ್ಕೋಶವೊಂದನ್ನು ತಯಾರಿಸಬೇಕು.  ಇದರ ವಿದ್ಯುದ್ವಾಹಕ ಶಕ್ತಿಯನ್ನು ಪೊಟೆನ್ಷಿಯೋಮೀಟರ್ ಉಪಯೋಗಿಸಿ ಅಳೆಯಬಹುದು. ಶಿಷ್ಟ ಎಲೆಕ್ಟ್ರೋಡಿನ ಏಕಎಲೆಕ್ಟ್ರೋಡ್ ವಿಭವವನ್ನು ಶೂನ್ಯವೆಂದಿಟ್ಟುಕೊಂಡರೆ ಅಳೆದ ವಿದ್ಯುದ್ವಾಹಕ ಶಕ್ತಿಯೇ ಎಲೆಕ್ಟ್ರೋಡ್ ವಿಭವಕ್ಕೆ ಸಮವಾಗಿರುತ್ತದೆ.  ಸಾಮಾನ್ಯವಾಗಿ ಜಲಜನಕ ಎಲೆಕ್ಟ್ರೋಡನ್ನು ಶಿಷ್ಟ ಎಲೆಕ್ಟ್ರೋಡಾಗಿ ಉಪಯೋಗಿಸುತ್ತಾರೆ.  ಆದರೆ ಇದರ ತಯಾರಿಕೆ ಸ್ವಲ್ಪ ಕಠಿಣವಾದ್ದರಿಂದ ಕ್ಯಾಲೊಮೆಲ್ ಎಲೆಕ್ಟ್ರೋಡನ್ನು ದ್ವಿತೀಯ ಮಾನಕ ಎಲೆಕ್ಟ್ರೋಡಾಗಿ ಉಪಯೋಗಿಸಬಹುದು.  ಇದಕ್ಕೆ ಹಲವಾರು ರೂಪಗಳಿದ್ದು ಸಾಮಾನ್ಯವಾಗಿ ಪ್ರಯೋಗಶಾಲೆಯಲ್ಲಿ ಉಪಯೋಗಿಸುವ ಕ್ಯಾಲೊಮೆಲ್ ಎಲೆಕ್ಟ್ರೋಡನ್ನು ಚಿತ್ರ 1 ರಲ್ಲಿ ತೋರಿಸಿದೆ.  ಇಲ್ಲಿ ಗಾಜಿನ ಪಾತ್ರೆ ಂ ಗೆ ಪಾಶ್ರ್ವ ಬಾಹು ಃಯನ್ನು ಸೇರಿಸಿದೆ.  ಪಾತ್ರೆಯ ತಳದಲ್ಲಿ ಶುದ್ಧ ಪಾದರಸ, ಅದರ ಮೇಲೆ ಕ್ಯಾಲೊಮೆಲ್ (Hg2Cl2) ಮತ್ತು ಪಾದರಸದ ಗಂಜಿಯನ್ನಿಟ್ಟಿದೆ.  ಉಳಿದ ಜಾಗದಲ್ಲಿ ಕ್ಯಾಲೊಮೆಲಿನಲ್ಲಿ ಸಂತೃಪ್ತಗೊಳಿಸಿರುವ ಪೊಟಾಸಿಯಂ ಕ್ಲೋರೈಡ್ ದ್ರಾವಣ ತುಂಬಿದೆ.  ಆಮೇಲೆ ಒಂದು ಪ್ಲಾಟಿನಂ ಎಲೆಕ್ಟ್ರೋಡನ್ನು ಚಿತ್ರದಲ್ಲಿ ತೋರಿಸಿರುವಂತೆ ಪಾತ್ರೆಯಲ್ಲಿರುವ ಪಾದರಸದಲ್ಲಿ ಮುಳುಗಿಸಿಡಬೇಕು.  ಪಾಶ್ರ್ವ ಬಾಹು ಃಯನ್ನು ಯಾವಾಗಲೂ ಪೊಟಾಸಿಯಂ ಕ್ಲೋರೈಡ್ ದ್ರಾವಣವಿರುವ ಸೀಸೆಯೊಂದರಲ್ಲಿ ಮುಳುಗಿಸಬೇಕು.  ಈ ರೀತಿ ತಯಾರಿಸಿದ ಕ್ಯಾಲೊಮೆಲ್ ಎಲೆಕ್ಟ್ರೋಡ್ ವಿಭವ ಪೊಟಾಸಿಯಂ ಕ್ಲೋರೈಡ್ ದ್ರಾವಣದ ಸಾರದ ಮೇಲೆ ಅವಲಂಬಿಸಿರುತ್ತದೆ.  ಈ ದ್ರಾವಣದ ಸಾರ ಹೆಚ್ಚಿದಂತೆಲ್ಲ ವಿಭವ ಕಡಿಮೆ ಆಗುತ್ತದೆ.  ಇದನ್ನು ಮುಂದಿನ ಪಟ್ಟಿಯಲ್ಲಿ ತೋರಿಸಿದೆ.
  
ಪೊಟಾಸಿಯಂ ಕ್ಲೋರೈಡ್ ದ್ರಾವಣದ ಸಾರ

ಕ್ಯಾಲೊಮೆಲ್ ಎಲೆಕ್ಟ್ರೋಡ್ ವಿಭವ
(25ಲಿ ಸೆಂ.ನಲ್ಲಿ)

  0.1  ಸಮತುಲ್ಯ
"
ಸಂತೃಪ್ತ ದ್ರಾವಣ 
 ವೋಲ್ಟ್
"
            0.2415    "

ಕ್ಯಾಲೊಮೆಲ್ ಎಲೆಕ್ಟ್ರೋೀಡಿನ ವಿಭವ ಸ್ವಲ್ಪ ಮಟ್ಟಿಗೆ ಪ್ರಯೋಗಶಾಲೆಯ ಉಷ್ಣತೆಯ ಮೇಲೂ ಅವಲಂಬಿಸಿದೆ.  ಉಷ್ಣತೆ ಹೆಚ್ಚಿದಂತೆಲ್ಲ ವಿಭವ ಕಡಿಮೆ ಆಗುತ್ತದೆ.  ಪೊಟಾಸಿಯಂ ಕ್ಲೋರೈಡ್ ದ್ರಾವಣವುಳ್ಳ ಕ್ಯಾಲೊಮೆಲ್ ಎಲೆಕ್ಟ್ರೋಡಿಗೆ ಇದನ್ನು ಕೆಳಗಿನ ಸಮೀಕರಣದಿಂದ ತೋರಿಸಬಹುದು.

ವಿಭವ=0.2415-7.6 x 10-4  (ಣ-25), ಇಲ್ಲಿ ಣ ಎನ್ನುವುದು ಪ್ರಯೋಗ ಶಾಲೆಯ ಉಷ್ಣತೆ (ಸೆಂ.ಗಳಲ್ಲಿ).
ಕ್ಯಾಲೊಮೆಲ್ ಎಲೆಕ್ಟ್ರೋಡಿನಲ್ಲಿ ಉಂಟಾಗುವ ವಿದ್ಯುದ್ರಾಸಾಯನಿಕ ಕ್ರಿಯೆಯನ್ನು ಈ ರೀತಿ ವಿವರಿಸಬಹುದು.
Hg2Cl2 +  2e- 2Hg +  2Cl-
ಘನ   ಎಲೆಕ್ಟ್ರಾನ್   ದ್ರವ
ಇತರ ಎಲೆಕ್ಟ್ರೋಡ್‍ಗಳ ವಿಭವಗಳನ್ನು ಕಂಡುಹಿಡಿಯಬೇಕಾದರೆ ಅವನ್ನು ಕ್ಯಾಲೊಮೆಲ್ ಎಲೆಕ್ಟ್ರೋಡ್ ಜೊತೆಗೆ ಸೇರಿಸಿ ಒಂದು ವಿದ್ಯುತ್ಕೋಶವನ್ನು ರಚಿಸಬೇಕು.  ಇದನ್ನು ಚಿತ್ರ 2 ರಲ್ಲಿ ತೋರಿಸಿದೆ. ಎಲೆಕ್ಟ್ರೋಡ್ ಇಟ್ಟಿರುವ ದ್ರಾವಣಕ್ಕೂ ಕ್ಯಾಲೊಮೆಲ್ ಎಲೆಕ್ಟ್ರೋಡಿನಲ್ಲಿರುವ ಪೊಟಾಸಿಯಂ ಕ್ಲೋರೈಡ್ ದ್ರಾವಣಕ್ಕೂ ಸಂಪರ್ಕ ಒದಗಿಸಲು ಲವಣಸೇತುವೆಯನ್ನು ಉಪಯೋಗಿಸಬೇಕು.  ಈ ವಿದ್ಯುತ್ಕೋಶದ ವಿದ್ಯುದ್ವಾಹಕ ಶಕ್ತಿಯನ್ನು ಕಂಡುಹಿಡಿದು ಅದರಲ್ಲಿ ಕ್ಯಾಲೊಮೆಲ್ ಎಲೆಕ್ಟ್ರೋಡಿನ ವಿಭವವನ್ನು ಕಳೆದರೆ ಉಳಿಯುವುದೇ ಎಲೆಕ್ಟ್ರೋಡಿನ ವಿಭವ.  ಕ್ಯಾಲೊಮೆಲ್ ಎಲೆಕ್ಟ್ರೋಡನ್ನು ದ್ರಾವಣಗಳ ಅಳೆಯುವುದಕ್ಕೂ ಮತ್ತು ಪೊಟೆನ್ಷಿಯೋ ಮೀಟರ್ ಅನುಮಾಪನಗಳಲ್ಲಿಯೂ ಉಪಯೋಗಿಸುತ್ತಾರೆ.  									 (ಡಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ